BEST VIEW IN MOBILE

JOIN OUR WHATSAPP GROUP

JOIN OUR WHATSAPP GROUP
ಸರ್ಕಾರಿ ಯೋಜನೆಗಳ ಮಾಹಿತಿಯನ್ನು ತಿಳಿಯಲು ನಮ್ಮ ವಾಟ್ಸ್ ಅಪ್ ಗ್ರೂಪಿಗೆ ನಿಮ್ಮ ಹೆಸರನ್ನು ನೋಂದಾಯಿಸಿ

SARKARI YOJANA UPDATES

ಬೆಂಗಳೂರು ವಸತಿ ಯೋಜನೆ; ಅರ್ಜಿ ಸಲ್ಲಿಕೆಗೆ ಅರ್ಹತೆ ಏನು? ಆಸಕ್ತರು 30/4/2021ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.

 ಬೆಂಗಳೂರು ವಸತಿ ಯೋಜನೆ; ಅರ್ಜಿ ಸಲ್ಲಿಕೆಗೆ ಅರ್ಹತೆ ಏನು?

ಬೆಂಗಳೂರು, ಏಪ್ರಿಲ್ 01; ಬೆಂಗಳೂರು ನಗರದಲ್ಲಿ ಮನೆ ಮಾಡುವುದು ಹಲವಾರು ಜನರ ಕನಸು. ಇದಕ್ಕಾಗಿ 'ಬೆಂಗಳೂರು ವಸತಿ ಯೋಜನೆ' ರೂಪಿಸಲಾಗಿದೆ. ಆಸಕ್ತರು 30/4/2021ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.

ವಸತಿ ಸಚಿವ ವಿ. ಸೋಮಣ್ಣ ಅವರು ಫೇಸ್ ಬುಕ್ ಪೋಸ್ಟ್ ನಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಅರ್ಹರು ಏಪ್ರಿಲ್ 30ರ ಒಳಗಾಗಿ ಅರ್ಜಿ ಸಲ್ಲಿಸಬೇಕಾಗಿದ್ದು, ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದ್ದಾರೆ.

ಪ್ರತಿ ಘಟಕ (1ಬಿಎಚ್‌ಕೆ) ಮೊತ್ತ 10.6 ಲಕ್ಷ ರೂ.ಗಳು. 2.7 ಲಕ್ಷ ಸಹಾಯಧನ ಹೊರತುಪಡಿಸಿ ಬಾಕಿ ಮೊತ್ತ 7.9 ಲಕ್ಷ ರೂ.ಗಳು. ಮನೆ ಹಂಚಿಕೆಯಾದ ನಂತರ ರಾಜೀವ್ ಗಾಂಧಿ ವಸತಿ ನಿಗಮ ಸೂಚಿಸಿದ ಸಂದರ್ಭದಲ್ಲಿ ಶೇ 25ರಷ್ಟು ಪಾವತಿ ಮಾಡಬೇಕು.

ಉಳಿದ ಹಣಕ್ಕೆ ಸಾಲ ಪಡೆಯಲು ಇಚ್ಚಿಸಿದಲ್ಲಿ ನಿಗಮದ ವತಿಯಿಂದ 15 ವರ್ಷಗಳಿಗೆ ಸಾಲ ನೀಡಲಾಗುತ್ತದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಲು ವೆಬ್ ಸೈಟ್‌ಗೆ ಭೇಟಿ ನೀಡಬಹುದು.







ಅರ್ಜಿ ಸಲ್ಲಿಸಲು ಅರ್ಹತೆ

ಅರ್ಜಿಗಳನ್ನು ಸಲ್ಲಿಸುವವರ ವಾರ್ಷಿಕ ಆದಾಯ 3 ಲಕ್ಷ ಮೀರಿರಬಾರದು. ಕನಿಷ್ಠ 5 ವರ್ಷ ಬೆಂಗಳೂರು ನಗರ ಅಥವ ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ವಾಸವಾಗಿರಬೇಕು. ರಾಜ್ಯದಲ್ಲಿ ಎಲ್ಲಿಯೂ ಸ್ವಂತ ಮನೆ ಹೊಂದಿರಬಾರದು









ಯಾವ-ಯಾವ ದಾಖಲೆಗಳು

ಅರ್ಜಿಗಳನ್ನು ಸಲ್ಲಿಸಲು ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವಾಸ ದೃಢೀಕರಣ ಪತ್ರ, ಬಿಪಿಎಲ್/ ಎಪಿಎಲ್ ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಚುನಾವಣಾ ಆಯೋಗದ ಗುರುತಿನ ಚೀಟಿ ಸಂಖ್ಯೆ, ಬ್ಯಾಂಕ್ ಖಾತೆ ನಂಬರ್ ದಾಖಲೆಗಳು ಬೇಕು.
















ಅರ್ಜಿ ಹಾಕಲು ಸಂಪರ್ಕಿಸಿ 9916444424

Comments

Post a Comment

ದಯವಿಟ್ಟು ನಿಮ್ಮ ಯಾವುದೇ ಮಾಹಿತಿಯನ್ನು ನಮಗೆ ವಾಟ್ಸಪ್ ಮಾಡಿ 9916444424

SUBCRIBE OUR YOUTUBE

SUBCRIBE OUR YOUTUBE
ತಪ್ಪದೆ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ

Popular Posts

ಪ್ರಧಾನ ಮಂತ್ರಿ ಶ್ರಮ್ ಯೋಗಿ ಮನ್-ಧನ್

ಮನೆ ಇಲ್ಲದವರಿಗೆ ವಸತಿ ಯೋಜನೆಯಿಂದ ಸಿಹಿ ಸುದ್ದಿ

ರೇಷನ್ ಕಾರ್ಡ್ ಬಗ್ಗೆ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ ಮತ್ತು ಮಾಹಿತಿ ಪಡೆಯಿರಿ

GOOGLE MAP