Posts

JOIN OUR WHATSAPP GROUP

JOIN OUR WHATSAPP GROUP
ಸರ್ಕಾರಿ ಯೋಜನೆಗಳ ಮಾಹಿತಿಯನ್ನು ತಿಳಿಯಲು ನಮ್ಮ ವಾಟ್ಸ್ ಅಪ್ ಗ್ರೂಪಿಗೆ ನಿಮ್ಮ ಹೆಸರನ್ನು ನೋಂದಾಯಿಸಿ

SARKARI YOJANA UPDATES

ಆರು ಕೋಟಿ ಪಿಎಫ್ ಖಾತೆದಾರರಿಗೆ ಖುಷಿ ಸುದ್ದಿ

Image
  ನೌಕರರ ಭವಿಷ್ಯ ನಿಧಿ ಸಂಘಟನೆಯ 6 ಕೋಟಿ ಜನರಿಗೆ ಖುಷಿ ಸುದ್ದಿಯೊಂದಿದೆ. ಜುಲೈನಲ್ಲಿ ಪಿಎಫ್ ಖಾತೆಗೆ ದೊಡ್ಡ ಮೊತ್ತ ಬರಲಿದೆ. 2020-21ರ ಆರ್ಥಿಕ ವರ್ಷದಲ್ಲಿ  ಚಂದಾದಾರರ ಖಾತೆಗೆ ಶೇಕಡಾ 8.5ರಷ್ಟು ಬಡ್ಡಿಯನ್ನು ವರ್ಗಾಯಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಕಾರ್ಮಿಕ ಸಚಿವಾಲಯದ ಅನುಮೋದನೆಯ ನಂತರ ಶೇಕಡಾ 8.5ರಷ್ಟು ಬಡ್ಡಿ ಮೊತ್ತವು ಇಪಿಎಫ್‌ಒ ಚಂದಾದಾರರ ಖಾತೆಗೆ ಬರಲಿದೆ. ಸಚಿವಾಲಯದ ಅನುಮೋದನೆಯ ನಂತರ ವರ್ಗಾವಣೆ ಪ್ರಕ್ರಿಯೆ ಶುರುವಾಗಲಿದೆ. ಕಳೆದ 2019-20ರ ಆರ್ಥಿಕ ವರ್ಷದಲ್ಲಿ ಕೆವೈಸಿ ತೊಂದರೆಯಿಂದಾಗಿ ಬಡ್ಡಿ ಪಡೆಯಲು ಪಿಎಫ್ ಖಾತೆದಾರರು ತೊಂದರೆ ಅನುಭವಿಸಿದ್ದರು. 2020-21ರ ಆರ್ಥಿಕ ವರ್ಷದಲ್ಲಿ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಶೇಕಡಾ 8.5 ರಂತೆ ಬಡ್ಡಿ ನೀಡಲು ಇಪಿಎಫ್‌ಒ ನಿರ್ಧರಿಸಿದೆ. ಇದು ಕಳೆದ 7 ವರ್ಷಗಳಲ್ಲಿ ಕಡಿಮೆ ಬಡ್ಡಿದರವಾಗಿದೆ. ಇದಕ್ಕೂ ಮೊದಲು, 2013 ರ ಹಣಕಾಸು ವರ್ಷದಲ್ಲಿ, ಇಪಿಎಫ್ ಮೇಲಿನ ಬಡ್ಡಿದರಗಳು ಶೇಕಡಾ 8.5ರಷ್ಟಾಗಿತ್ತು .

ತಿಂಗಳಿಗೆ '1600 ರೂ. ಹೂಡಿಕೆ ಮಾಡಿ, ನಿವೃತ್ತಿಯ ನಂತರ '1 ಕೋಟಿ' ಪಡೆಯಿರಿ.

Image
 ಈ ಸರ್ಕಾರಿ ಯೋಜನೆಯಲ್ಲಿ ತಿಂಗಳಿಗೆ '1600 ರೂ. ಹೂಡಿಕೆ ಮಾಡಿ, ನಿವೃತ್ತಿಯ ನಂತರ '1 ಕೋಟಿ' ಪಡೆಯಿರಿ. ನವದೆಹಲಿ: ಜೀವನ ತುಂಬಾ ಅನಿಶ್ಚಿತವಾಗಿದೆ ಅನ್ನೋದನ್ನ ಕೊರೊನಾ ವೈರಸ್ ಜನರಿಗೆ ಮತ್ತೊಮ್ಮೆ ತೋರಿಸಿಕೊಟ್ಟಿದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ವೃದ್ಧಾಪ್ಯ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಸುರಕ್ಷಿತ ಭವಿಷ್ಯಕ್ಕಾಗಿ ನೀವು ವ್ಯವಸ್ಥೆ ಮಾಡುವುದು ಮುಖ್ಯ. ಸುಲಭವಾಗಿ ಸುರಕ್ಷಿತ ಭವಿಷ್ಯವನ್ನ ಸೃಷ್ಟಿಸಲು ಎನ್ ಪಿಎಸ್ ಖಾತೆಗಳನ್ನು ತೆರೆಯಲು ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ಖಾಸಗಿ ಕಂಪನಿಗಳ ಉದ್ಯೋಗಿಗಳು ಮತ್ತು ಸಣ್ಣ ಉದ್ಯಮಗಳು ಸಹ ಈ ಯೋಜನೆಯಡಿ ಪ್ರಯೋಜನ ಪಡೆಯಬಹುದು. ಕೊರೊನಾ ಬಿಕ್ಕಟ್ಟಿನ ನಡುವೆ, ಭಾರತೀಯ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್ಡಿಎ) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಎನ್ ಪಿಎಸ್ ಅಡಿಯಲ್ಲಿ ಖಾತೆ ತೆರೆಯಲು ಹೊಸ ಸೌಲಭ್ಯವನ್ನ ಒದಗಿಸಿದೆ. ಇಲ್ಲಿಯವರೆಗೆ, ಇ-ಕೆವೈಸಿ ಅಥವಾ ಪ್ಯಾನ್ ಮತ್ತು ಬ್ಯಾಂಕ್ ಖಾತೆಯ ಮೂಲಕ ಇಎನ್ ಪಿಎಸ್ ಅಡಿಯಲ್ಲಿ ನೋಂದಣಿಯನ್ನ ಆಫ್ ಲೈನ್ನಲ್ಲಿ ಮಾಡಲಾಗಿತ್ತು. ಇದು ಈಗ ಕೊರೊನಾ ಅವಧಿಯಲ್ಲಿ ಆನ್ಲೈನ್ ಆಧಾರ್ ಇ-ಕೆವೈಸಿ ಮೂಲಕ ಆನ್ ಲೈನ್ ಖಾತೆಗಳನ್ನ ತೆರೆಯಲು ಅನುಕೂಲ ಮಾಡಿಕೊಟ್ಟಿದೆ. 1 ಕೋಟಿ ಪಡೆಯಲು ತಿಂಗಳಿಗೆ 1600 ರೂ.ಉಳಿತಾಯ ಮಾಡಬೇಕು..! ನಿಮಗೆ 20 ವರ್ಷ ವಯಸ್ಸಾಗಿದ್ದೀರಿ ಎಂದಿಟ್ಟುಕೊಳ್ಳಿ. ನೀವು ಎನ್ ಪಿಎಸ್ ಖಾತೆಯಲ್ಲಿ ತಿಂಗಳಿಗ...

PAN-Aadhar ಲಿಂಕ್ ಗೆ ಕೊನೆ ದಿನ ನಿಗದಿಯಾಗಿದೆ: ಮಾಡಿಲ್ಲ ಅಂದ್ರೆ ಏನಾಗುತ್ತೆ ಗೊತ್ತೇ?

Image
ಪ್ಯಾನ್‌- ಆಧಾರ್‌ ಲಿಂಕ್‌ ಮಾಡಲು ಮತ್ತೆ ಗಡುವು ವಿಸ್ತರಣೆ! ಜೂನ್‌ 30 ಕೊನೇ ದಿನ ಆದಾಯ ತೆರಿಗೆ ಇಲಾಖೆಯು ಪ್ಯಾನ್‌ - ಆಧಾರ್‌ ಲಿಂಕ್‌ ಮಾಡಲು ಇದ್ದ ಮಾರ್ಚ್‌ 31ರ ಗಡುವನ್ನು 2021ರ ಜೂನ್‌ 30ಕ್ಕೆ ವಿಸ್ತರಿಸಿದೆ. ಕೊರೊನಾ ಸೋಂಕು ಮತ್ತೆ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಹೈಲೈಟ್ಸ್‌: ಪ್ಯಾನ್‌- ಆಧಾರ್‌ ಲಿಂಕ್‌ ಮಾಡಲು ಗಡುವು ವಿಸ್ತರಿಸಿದ ಆದಾಯ ತೆರಿಗೆ ಇಲಾಖೆ ಈ ಹಿಂದೆ ಮಾರ್ಚ್‌ 31ಕ್ಕೆ ಇದ್ದ ಗಡುವು ಜೂನ್ 30ಕ್ಕೆ ವಿಸ್ತರಣೆ ಕೊರೊನಾ ಸೋಂಕು ಮತ್ತೆ ಹರಡುತ್ತಿರುವ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆ ಬೆಂಗಳೂರು:  ಪ್ಯಾನ್‌ ಮತ್ತು  ಆಧಾರ್‌ ಕಾರ್ಡ್‌  ಅನ್ನು ಲಿಂಕ್ ಮಾಡಲು ಕೊನೇ ದಿನಾಂಕ ಮತ್ತೊಮ್ಮೆ ವಿಸ್ತರಣೆಯಾಗಿದೆ. ಆದಾಯ ತೆರಿಗೆ ಇಲಾಖೆಯು ಪ್ಯಾನ್‌ - ಆಧಾರ್‌ ಲಿಂಕ್‌ ಮಾಡಲು ಇದ್ದ ಮಾರ್ಚ್‌ 31ರ ಗಡುವನ್ನು 2021ರ ಜೂನ್‌ 30ಕ್ಕೆ ವಿಸ್ತರಿಸಿದೆ. ಕೊರೊನಾ ಸೋಂಕು ಮತ್ತೆ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಈ ಹಿಂದೆ ಪ್ಯಾನ್‌ ಮತ್ತು ಆಧಾರ್‌ ಕಾರ್ಡ್‌ ಅನ್ನು ಲಿಂಕ್ ಮಾಡಲು ಮಾರ್ಚ್‌ 31ನ್ನು ಕಡೇ ದಿನವಾಗಿ ನಿಗದಿಮಾಡಲಾಗಿತ್ತು. 2021ರ ಮಾರ್ಚ್ 31ರೊಳಗೆ ಲಿಂಕ್ ಮಾಡದಿದ್ದರೆ 1000 ರೂ. ದಂಡವನ್ನೂ ನಿಗದಿಮಾಡಲಾಗಿತ್ತು. ಒಂದು ವೇಳೆ ನಿಗದಿತ ಅವಧಿಯೊಳಗೆ ನಿಮ್ಮ  ಪ್ಯಾನ್‌ ಕಾರ್ಡ್‌  ಆಧಾರ್‌ನೊಂದಿಗೆ ಲಿಂಕ್‌ ಆಗದಿದ್ದರೆ ಪ್ಯಾನ್‌ ಕಾ...

ಪ್ರಧಾನ ಮಂತ್ರಿ ಕಿಸಾನ್ ಮನ್‌ಧನ್ ಯೋಜನೆ-ಈ ಯೋಜನೆ ಮೂಲಕ ರೈತ ಪ್ರತಿ ತಿಂಗಳು 3,000 ರೂಪಾಯಿ ನಿವೃತ್ತಿ ವೇತನ ಪಡೆಯುತ್ತಾನೆ.

Image
ಭಾರತ ಕೃಷಿ ಪ್ರಧಾನ ದೇಶ. ರೈತನೇ ಆಧಾರ. ಹೀಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಮನ್‌ಧನ್ ಯೋಜನೆ ಮೂಲಕ ರೈತರಿಗೆ ನಿವೃತ್ತಿ ವೇತನ ನೀಡುತ್ತಿದೆ. ಈ ಯೋಜನೆ ಮೂಲಕ ರೈತ ಪ್ರತಿ ತಿಂಗಳು 3,000 ರೂಪಾಯಿ ನಿವೃತ್ತಿ ವೇತನ ವೇತನ ಪಡೆಯುತ್ತಾನೆ. ಅಂದರೆ ವಾರ್ಷಿಕ 36,000 ರೂಪಾಯಿ ರೈತನಿ ಕೇಂದ್ರ ಸರ್ಕಾರ ನೀಡಲಿದೆ. ಈ ಯೋಜನೆ ಮೂಲಕ ರೈತರು ನಿವೃತ್ತಿ ವೇತನ ಪಡೆಯುವುದು ಹೇಗೆ? ಈ ಕುರಿತ ಸಂಪೂರ್ಣ ವಿವರ  ಇಲ್ಲಿದೆ. 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ PM ಕಿಸಾನ್ ಮನ್‌ಧನ್ ಯೋಜನೆ ಜಾರಿಗೆ ತಂದಿದ್ದಾರೆ ವಾರ್ಷಿಕ 660 ರೂಪಾಯಿ ಪಾವತಿಸಿದರೆ ನಿವೃತ್ತಿ ವೇತನವಾಗಿ ಪ್ರತಿ ತಿಂಗಳು 3000 ರೂಪಾಯಿ ಕೇಂದ್ರ ಸರ್ಕಾರ ನೀಡಲಿದೆ ಇಳಿ ವಯಸ್ಸಿನ ರೈತರು ಹಾಗೂ ಕಡಿಮೆ ಪ್ರದೇಶದಲ್ಲಿ ಬೆಳೆ ಬೆಳೆಯುವ ರೈತರಿಗೆ ಹೆಚ್ಚಿನ ಅನೂಕೂಲ ಈ ಯೋಜನೆಯ ಅಡಿ 18 ರಿಂದ 40 ವಯಸ್ಸಿನ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು 60 ವಯಸ್ಸು ದಾಟಿದ ರೈತರಿಗೆ ಪ್ರತಿ ತಿಂಗಳು 3,000 ರೂಪಾಯಿ ನಿವೃತ್ತಿ ವೇತನ ಸಿಗಲಿದೆ ರೈತ ಸಾವನ್ನಪ್ಪಿದರೆ  ಆತನ ಪತ್ನಿಗೆ ಶೇಕಡಾ 50 ರಷ್ಟು ಅಂದರೆ ಪ್ರತಿ ತಿಂಗಳು 1,500 ರೂಪಾಯಿ ವೇತನ ಸಿಗಲಿದೆ. ಕುಟುಂಬದಲ್ಲಿ ಕೇವಲ ಪತ್ನಿ ಮಾತ್ರ  ಶೇಕಡಾ 50 ರಷ್ಟು ನಿವೃತ್ತಿ ವೇತನ ಪಡೆಯಲು ಅರ್ಹರು ಈ ಯೋಜನೆ ಲಾಭ ಪಡೆಯಲು ಯಾವುದೇ ನೋಂದಾವಣಿ  ಶುಲ್ಕವಿಲ್ಲ, ಇಷ್ಟೇ ಅಲ್ಲ ದಾಖಲೆ  ಸಲ್ಲಿಸಿದ ಹಲವು ರ...

ಸ್ವಯಂ ಉದ್ಯೋಗ ಯೋಜನೆ

Image
  ಉದ್ಯಮಶೀಲತಾ ಯೋಜನೆ ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ/ಯುವತಿಯರು ಸಣ್ಣಕೈಗಾರಿಗೆ, ಸೇವಾ ಕ್ಷೇತ್ರ ಮತ್ತು ವ್ಯಾಪಾರಿ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ನಿಗಮದ ಸಹಾಯಧನ ಮತ್ತು ಬ್ಯಾಂಕಿನ ಸಾಲ ವ್ಯವಸ್ಥೆಯೊಂದಿಗೆ ಯೋಜನೆಯನ್ನು ಅನುಷ್ಟಾನ ಮಾಡಲಾಗುವುದು. ಈ ಯೋಜನೆಯಡಿ ಮೂರು ಹಂತದ ಘಟಕ ವೆಚ್ಚವನ್ನು ಆಧರಿಸಿ ಸಹಾಯಧನವನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ. 1.  ಘಟಕ ವೆಚ್ಚ ರೂ. 5.00 ಲಕ್ಷಗಳವರೆಗೆ ಶೇ.70% ಅಥವಾ ಗರಿಷ್ಠ ರೂ. 3.50 ಲಕ್ಷ ಸಹಾಯಧನ 2.  ಘಟಕ ವೆಚ್ಚ ರೂ. 5.00 ಲಕ್ಷ ದಿಂದ ರೂ. 10.00 ಲಕ್ಷಗಳವರೆಗೆ ಶೇ.60% ಅಥವಾ ಗರಿಷ್ಠ ರೂ. 5.00 ಲಕ್ಷ ಸಹಾಯಧನ 3.  ಘಟಕ ವೆಚ್ಚ ರೂ. 10.00 ಲಕ್ಷ ದಿಂದ ರೂ. 20.00 ಲಕ್ಷಗಳವರೆಗೆ ಶೇ.50% ಅಥವಾ ಗರಿಷ್ಠ ರೂ. 5.00 ಲಕ್ಷ ಸಹಾಯಧನ ನಿಗಮದ ಸಹಾಧನವನ್ನು ಹೊರತುಪಡಿಸಿ ಘಟಕ ವೆಚ್ಚದ ಉಳಿದ ಭಾಗವನ್ನು ಬ್ಯಾಂಕ್ ಸಾಲದಿಂದ ಭರಿಸಲಾಗುವುದು. ಇ)  ಕೆಲವೊಂದು ಯೋಜನೆಗಳಿಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಹಾಗೂ ಅಭಿವೃದ್ದಿ ನಿಗಮದಿಂದ ಸಾಲ ಪಡೆದು ನೇರವಾಗಿ ಫಲಾನುಭವಿಗಳಿಗೆ ಸಾಲಸೌಲಭ್ಯ ಒದಗಿಸಲಾಗುವುದು. ಘಟಕ ವೆಚ್ಚದಲ್ಲಿ ಶೇ.5ರಷ್ಟು ಭಾಗ ಫಲಾನುಭವಿಯ ಪಾಲು, ಶೇ.20 ಭಾಗ ನಿಗಮದಿಂದ ಅಂಚಿನ ಹಣ(ಗರಿಷ್ಠ ರೂ.1.00ಲಕ್ಷ) ಹಾಗೂ ಉಳಿದ ಶೇ.75 ಭಾಗವನ್ನು ರಾಷ್ಟ್ರೀಯ ಹಣಕಾಸು ಅಭಿವೃದ್ದಿ ನಿಗಮದ ಹಣದಿಂದ ಸಾಲದ ರೂಪದಲ್ಲಿ ಭರಿಸಲ...

ಐರಾವತ ಯೋಜನೆ-ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಈ ಯೋಜನೆಗೆ ಗರಿಷ್ಠ ರೂ. 5.00 ಲಕ್ಷಗಳವರೆಗೆ ನಿಗಮದಿಂದ ಸಹಾಯಧನ ಒದಗಿಸಲಾಗುವುದು

Image
ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಈ ಯೋಜನೆಗೆ ಗರಿಷ್ಠ ರೂ. 5.00 ಲಕ್ಷಗಳವರೆಗೆ ನಿಗಮದಿಂದ ಸಹಾಯಧನ ಒದಗಿಸಲಾಗುವುದು ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು ಲಘು ವಾಹನ ಚಾಲನಾ ಪರವಾನಗಿ ಹೊಂದಿರುವ ಪರಿಶಿಷ್ಟ ಜಾತಿಯ ನಿರುದ್ಯೋಗಿ ವಿಧ್ಯಾವಂತ ಯುವಕ / ಯುವತಿಯರಿಗೆ ಪ್ರವಾಸಿ ಟ್ಯಾಕ್ಸಿಗಳ ಮಾಲೀಕರನ್ನಾಗಿ ಮಾಡಿ “ಓಲಾ” / “ಉಬರ್” / “ಮೇರು” ಸಂಸ್ಥೆಗಳ ಸಹಯೋಗದಲ್ಲಿ ಅತಿ ಹೆಚ್ಚು ಆದಾಯ ಪಡೆಯುವ “ಐರಾವತ ಯೋಜನೆ” ಅನುಷ್ಟಾನಗೊಳಿಸಲು ಉದ್ದೇಶಿಸಿದೆ. ಕರ್ನಾಟಕ ರಾಜ್ಯ ಅಂತರಾಷ್ಟ್ರೀಯ ಮಟ್ಟದ ಪ್ರವಾಸಿಗರ ತಾಣವಾಗಿದ್ದು, ಈ ಯೋಜನೆಗೆ ಹೆಚ್ಚನ ಬೇಡಿಕೆ ಇರುತ್ತದೆ. ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಈ ಯೋಜನೆಗೆ ಗರಿಷ್ಠ ರೂ. 5.00 ಲಕ್ಷಗಳವರೆಗೆ ನಿಗಮದಿಂದ ಸಹಾಯಧನ ಒದಗಿಸಲಾಗುವುದು. ಉಳಿದ ಭಾಗ ಬ್ಯಾಂಕ್/ಹಣಕಾಸು ಸಂಸ್ಥೆ/ಫಲಾನುಭವಿಯ ವಂತಿಕೆಯಿಂದ ಭರಿಸಿ ಯೋಜನೆಯನ್ನು ಅನುಷ್ಟಾನ ಮಾಡಲಾಗುವುದು. ಆಯ್ಕೆಯಾದ ಫಲಾನುಭವಿಗಳಿದೆ “ಓಲಾ”/”ಉಬರ್”/”ಮೇರು” ಸಂಸ್ಥೆಗಳೊಂದಿಗೆ ಟೈ-ಅಪ್ ಮಾಡಿಕೊಂಡು ಬೇಡಿಕೆ ಇರುವ ಮುಖ್ಯ ನಗರ ಪ್ರದೇಶಗಳಾದ ರಾಜಧಾನಿ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ ಇನ್ನಿತರೇ ಜಿಲ್ಲಾ ಕೇಂದ್ರಗಳಲ್ಲಿ ವಾಹನ ಚಾಲನೆ ಮಾಡಲು ವ್ಯವಸ್ಥೆ ಮಾಡಿ, ಯೋಜನೆಯನ್ನು ರೂಪಿಸಾಗಿದೆ.

ಸಮೃದ್ಧಿ ಯೋಜನೆ-ಆಯ್ಕೆಯಾದ ಪ್ರತೀ ಫಲಾನುಭವಿಗೆ ಗರಿಷ್ಠ ರೂ. 10.00 ಲಕ್ಷಗಳವರೆಗೆ ಆರ್ಥಿಕ ಬೆಂಬಲ ಒದಗಿಸಲಾಗುತ್ತದೆ.

Image
ಆಯ್ಕೆಯಾದ ಪ್ರತೀ ಫಲಾನುಭವಿಗೆ ಗರಿಷ್ಠ ರೂ. 10.00 ಲಕ್ಷಗಳವರೆಗೆ ಆರ್ಥಿಕ ಬೆಂಬಲ ಒದಗಿಸಲಾಗುತ್ತದೆ. ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮವು ಗ್ರಾಮೀಣ/ನಗರ ಪ್ರದೇಶಗಳಲ್ಲಿನ ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ/ಯುವತಿಯರನ್ನು ಉದ್ಯಮಶೀಲರನ್ನಾಗಿಸಲು “ಸಮೃದ್ಧಿ ಯೋಜನೆ” ಅನುಷ್ಟಾನಗೊಳಿಸಲು ಉದ್ದೇಶಿಸಿದೆ. ಸದರಿ ಯೋಜನೆಯಡಿ ಪರಿಶಿಷ್ಟ ಜಾತಿ ನಿರುದ್ಯೋಗಿಗಳಿಗೆ ವಿವಿಧ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ಹಾಗೂ ಲಾಭದಾಯಕವಾಗಿ ನಡೆಸಲು ಅಗತ್ಯವಾದ ಉದ್ಯಮಶೀಲತಾ ತರಬೇತಿ/ವೃತ್ತಿ ಕೌಶಲ್ಯ ತರಬೇತಿಯನ್ನು ನೀಡಿ ಮಾರುಕಟ್ಟೆ ವ್ಯವಸ್ಥೆಯೊಂದಿಗೆ ಘಟಕಗಳನ್ನು ಸೃಷ್ಟಿಸಲು ವ್ಯವಸ್ಥೆ ಮಾಡಲಾಗುವುದು. ಸದರಿ ಯೋಜನೆಯಡಿ ವಿವಿಧ ಉದ್ದೇಶಗಳಡಿ ಯೋಜನೆಗಳನ್ನು ರೂಪಿಸಲಾಗಿದೆ. ಉತ್ತಮ ಮಾರುಕಟ್ಟೆ ಹೊಂದಿರುವ ಸರ್ಕಾರಿ ಮತ್ತು ಖಾಸಗಿ ಬ್ರಾಂಡೆಡ್ ಸಂಸ್ಥೆಗಳ ಸಹಯೋಗದಲ್ಲಿ ಫ್ರಾಂಚೈಸಿ/ಡೀಲರ್ ಶಿಪ್ ವ್ಯವಸ್ಥೆಯೊಂದಿಗೆ ರಿಟೈಲ್ ವ್ಯಾಪಾರಿ ಮಳಿಗೆಗಳನ್ನು ಆರಂಭಿಸಲು ಅಗತ್ಯವಾದ ತಾಂತ್ರಿಕ ಬೆಂಬಲ ಹಾಗೂ ಆರ್ಥಿಕ ಬೆಂಬಲ ನೀಡಿ ಯಶ್ವಸಿ ಉದ್ದಿಮೆದಾರರನ್ನಾಗಿ ಮಾಡುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ. ಈಗಾಗಲೇ ಸರ್ಕಾರಿ ಮತ್ತು ಬ್ರಾಂಡೆಡ್ ಸಂಸ್ಥೆಗಳ ಜೊತೆ ಸರ್ಕಾರವು ಒಡಂಬಡಿಕೆ(ಎಂಓಯು) ಮಾಡಿಕೊಳ್ಳಲು ವ್ಯವಸ್ಥೆಯಾಗಿರುತ್ತದೆ. ಆಯ್ಕೆಯಾದ ಪ್ರತೀ ಫಲಾನುಭವಿಗೆ ಗರಿಷ್ಠ ರೂ. 10.00 ಲಕ್ಷಗಳವರೆಗೆ ಆರ್ಥಿಕ ಬೆಂಬಲ ಒದಗಿಸಲಾಗುತ್ತದೆ.  

ಉದ್ಯೋಗಿನಿ ಯೋಜನೆಯಡಿ ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

Image
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ, ಸರ್ಕಾರದ ಉದ್ಯೋಗಿನಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರ ಆದಾಯ ಉತ್ಪನ್ನಕರ ಚುಟವಟಿಕೆಗಳಲ್ಲಿ ತೊಗಿಸಿಕೊಂಡು.. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ, ಸರ್ಕಾರದ ಉದ್ಯೋಗಿನಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರ ಆದಾಯ ಉತ್ಪನ್ನಕರ ಚುಟವಟಿಕೆಗಳಲ್ಲಿ ತೊಗಿಸಿಕೊಂಡು, ಸ್ವಯಂ ಉದ್ಯೋಗಿಗಳಾಗದಲು ಬ್ಯಾಂಕ್ ಮುಖಾಂತರ ಸಾಲ ಮತ್ತು ನಿಗಮದಿಂದ ಸಹಾಯಧನ ನೀಡಲು ಅರ್ಹ ಮಹಿಳೆಯರಿಂದ ಆನ್‌ಲೈನ್‌ ಅರ್ಜಿ ಆಹ್ವಾನಿಸಲಾಗಿದೆ. ಘಟಕ ವೆಚ್ಚ ರೂ. 1 ಲಕ್ಷ ಮೇಲ್ಪಟ್ಟು ರೂ.5 ಲಕ್ಷದವರೆಗೆ, ಘಟಕ ವೆಚ್ಚದ ಹಾಗೂ ಸಹಾಯಧನ ಘಟಕ ವೆಚ್ಚ ಶೇ.70 ಅಥವಾ ಗರಿಷ್ಠ ರೂ.3.50 ಲಕ್ಷ ಬದಲಾಗಿ ಘಟಕ ವೆಚ್ಚ ರೂ. 1 ಲಕ್ಷ ಮೇಲ್ಪಟ್ಟು ರೂ. 3 ಲಕ್ಷದವರೆಗೆ ಇರುವ ಯೋಜನೆಗಳಲ್ಲಿ ನಿಗಮದಿಂದ ಸಹಾಯಧನವನ್ನು ಘಟಕ ವೆಚ್ಚ ಶೇ.50 ರಷ್ಟು ಅಥವಾ ಗರಿಷ್ಠ ರೂ.1.50 ಲಕ್ಷ ಸಹಾಯಧನ ನೀಡಿ ಉಳಿದ ವೆಚ್ಚವನ್ನು ಬ್ಯಾಂಕುಗಳಿಂದ ಸಾಲದ ರೂಪದಲ್ಲಿ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಾಜಿದೇವದಾಸಿಯರು ಹಾಗೂ ಅವರ ಹೆಣ್ಣು ಮಕ್ಕಳಿಗೆ, ದಮನಿತ ಮಹಿಳೆಯರು ಹಾಗೂ ಅಂಗವಿಕಲರಿಗೆ ಆದ್ಯತೆ ನೀಡಲಾಗುವುದು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ನಡೆಯುತ್ತದೆ. ಸ್ವ ಉದ್ಯೋಗ ಮಾಡುವವರು ಈ ದಾಖಲಾತಿಯನ್ನು ತಪ್ಪದ...

ರೇಷನ್ ಕಾರ್ಡ್ ಗೆ ಹೊಸ ಸದಸ್ಯರ ಹೆಸರು ಸೇರಿಸುವುದು ಈಗ ಮತ್ತಷ್ಟು ಸುಲಭ! ಹೇಗೆ ಗೊತ್ತಾ?

Image
ನವದೆಹಲಿ. ಪಡಿತರ ಚೀಟಿ ಮೂಲಕ ಸರ್ಕಾರ ತಮ್ಮ ಬಡವರಿಗೆ ಪಡಿತರ ವನ್ನು ಒದಗಿಸುತ್ತದೆ. ಪಡಿತರ ಚೀಟಿಗಳನ್ನು ಅನೇಕ ಸ್ಥಳಗಳಲ್ಲಿ ಐಡಿ ಪುರಾವೆಯಾಗಿ ಬಳಸಲಾಗುತ್ತದೆ. ಎಲ್ ಪಿಜಿ ಸಂಪರ್ಕಗಳಲ್ಲಿ  ಚಾಲನಾ ಪರವಾನಗಿಗಳು  ಇತ್ಯಾದಿಗಳಲ್ಲಿ   ರೇಷನ್   ಕಾರ್ಡ್  ವಿಳಾಸ   ಪುರಾವೆಯಾಗಿಯೂ ಪ್ರಮಾಣೀಕರಿಸಲಾಗುತ್ತದೆ.  ಪಡಿತರ ಕಾರ್ಡ್ ಅನ್ನು ಒಂದು ನಿರ್ದಿಷ್ಟ ಆದಾಯ ಗುಂಪಿಗೆ ನೀಡಲಾಗುತ್ತದೆ. ಇದು ವಿವಿಧ ರಾಜ್ಯಗಳಲ್ಲಿ ವಿಭಿನ್ನ ಮಿತಿಗಳನ್ನು ಹೊಂದಿದೆ. ಕುಟುಂಬದಲ್ಲಿ ಮಗು ಅಥವಾ ಹೊಸ ಸೊಸೆಯಂತಹ ಹೊಸ ಸದಸ್ಯರು ನಿಮ್ಮ ಮನೆಗೆ ಸೇರಿಕೊಂಡಿದ್ದರೆ, ನೀವು ಅವರ ಹೆಸರನ್ನು ಪಡಿತರ ಕಾರ್ಡ್ ಗೆ ಸೇರಿಸಬಹುದು ಆದ್ದರಿಂದ ನೀವು ಈ ಸುಲಭ ಪ್ರಕ್ರಿಯೆಯನ್ನು ಅನುಸರಿಸಬೇಕು. ಪಡಿತರ ಕಾರ್ಡ್ ಗೆ ಹೊಸ ಸದಸ್ಯರ ಹೆಸರು ಸೇರುವುಸುವುದು ಹೇಗೆ? ಪಡಿತರ ಚೀಟಿಗೆ ಹೊಸ ಸದಸ್ಯರ ಹೆಸರನ್ನು ಸೇರಿಸಲು ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಮಾರ್ಪಡಿಸಬೇಕು. ಉದಾಹರಣೆಗೆ, ಮದುವೆಯ ನಂತರ ಹುಡುಗಿ ತನ್ನ ಉಪನಾಮವನ್ನು ಬದಲಾಯಿಸಿದರೆ, ಅವಳು ತನ್ನ ತಂದೆಯ ಬದಲಿಗೆ ತನ್ನ ಗಂಡನ ಹೆಸರಿನೊಂದಿಗೆ ತನ್ನ ಆಧಾರ್ ಕಾರ್ಡ್ ಅನ್ನು ಭರ್ತಿ ಮಾಡಬೇಕು ಮತ್ತು ಹೊಸ ವಿಳಾಸವನ್ನು ನವೀಕರಿಸಬೇಕಾಗುತ್ತದೆ. ನಂತರ ಹೊಸ ಆಧಾರ್ ಕಾರ್ಡ್ ನ ವಿವರಗಳನ್ನು ಗಂಡನ ಪ್ರದೇಶದ ಆಹಾರ ಇಲಾಖೆ ಅಧಿಕಾರಿಗೆ ನೀಡಬೇಕಾಗುತ್ತದೆ. ಆನ್ ಲೈನ್ ಪರಿಶೀಲನೆ...

SUBCRIBE OUR YOUTUBE

SUBCRIBE OUR YOUTUBE
ತಪ್ಪದೆ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ

Popular Posts

ಪ್ರಧಾನ ಮಂತ್ರಿ ಶ್ರಮ್ ಯೋಗಿ ಮನ್-ಧನ್

ಮನೆ ಇಲ್ಲದವರಿಗೆ ವಸತಿ ಯೋಜನೆಯಿಂದ ಸಿಹಿ ಸುದ್ದಿ

ರೇಷನ್ ಕಾರ್ಡ್ ಬಗ್ಗೆ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ ಮತ್ತು ಮಾಹಿತಿ ಪಡೆಯಿರಿ

GOOGLE MAP