ಸಮೃದ್ಧಿ ಸರ್ಕಾರಿ ಯೋಜನೆಗಳು

ಉದ್ಯಮಶೀಲತಾ ಯೋಜನೆ
ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ/ಯುವತಿಯರು ಸಣ್ಣಕೈಗಾರಿಗೆ, ಸೇವಾ ಕ್ಷೇತ್ರ ಮತ್ತು ವ್ಯಾಪಾರಿ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ನಿಗಮದ ಸಹಾಯಧನ ಮತ್ತು ಬ್ಯಾಂಕಿನ ಸಾಲ ವ್ಯವಸ್ಥೆಯೊಂದಿಗೆ ಯೋಜನೆಯನ್ನು ಅನುಷ್ಟಾನ ಮಾಡಲಾಗುವುದು. ಈ ಯೋಜನೆಯಡಿ ಮೂರು ಹಂತದ ಘಟಕ ವೆಚ್ಚವನ್ನು ಆಧರಿಸಿ ಸಹಾಯಧನವನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ.
1. ಘಟಕ ವೆಚ್ಚ ರೂ. 5.00 ಲಕ್ಷಗಳವರೆಗೆ ಶೇ.70% ಅಥವಾ ಗರಿಷ್ಠ ರೂ. 3.50 ಲಕ್ಷ ಸಹಾಯಧನ
2. ಘಟಕ ವೆಚ್ಚ ರೂ. 5.00 ಲಕ್ಷ ದಿಂದ ರೂ. 10.00 ಲಕ್ಷಗಳವರೆಗೆ ಶೇ.60% ಅಥವಾ ಗರಿಷ್ಠ ರೂ. 5.00 ಲಕ್ಷ ಸಹಾಯಧನ
3. ಘಟಕ ವೆಚ್ಚ ರೂ. 10.00 ಲಕ್ಷ ದಿಂದ ರೂ. 20.00 ಲಕ್ಷಗಳವರೆಗೆ ಶೇ.50% ಅಥವಾ ಗರಿಷ್ಠ ರೂ. 5.00 ಲಕ್ಷ ಸಹಾಯಧನ
ನಿಗಮದ ಸಹಾಧನವನ್ನು ಹೊರತುಪಡಿಸಿ ಘಟಕ ವೆಚ್ಚದ ಉಳಿದ ಭಾಗವನ್ನು ಬ್ಯಾಂಕ್ ಸಾಲದಿಂದ ಭರಿಸಲಾಗುವುದು.
ಇ) ಕೆಲವೊಂದು ಯೋಜನೆಗಳಿಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಹಾಗೂ ಅಭಿವೃದ್ದಿ ನಿಗಮದಿಂದ ಸಾಲ ಪಡೆದು ನೇರವಾಗಿ ಫಲಾನುಭವಿಗಳಿಗೆ ಸಾಲಸೌಲಭ್ಯ ಒದಗಿಸಲಾಗುವುದು. ಘಟಕ ವೆಚ್ಚದಲ್ಲಿ ಶೇ.5ರಷ್ಟು ಭಾಗ ಫಲಾನುಭವಿಯ ಪಾಲು, ಶೇ.20 ಭಾಗ ನಿಗಮದಿಂದ ಅಂಚಿನ ಹಣ(ಗರಿಷ್ಠ ರೂ.1.00ಲಕ್ಷ) ಹಾಗೂ ಉಳಿದ ಶೇ.75 ಭಾಗವನ್ನು ರಾಷ್ಟ್ರೀಯ ಹಣಕಾಸು ಅಭಿವೃದ್ದಿ ನಿಗಮದ ಹಣದಿಂದ ಸಾಲದ ರೂಪದಲ್ಲಿ ಭರಿಸಲಾಗುವುದು.
Comments
Post a Comment
ದಯವಿಟ್ಟು ನಿಮ್ಮ ಯಾವುದೇ ಮಾಹಿತಿಯನ್ನು ನಮಗೆ ವಾಟ್ಸಪ್ ಮಾಡಿ 9916444424